ಡಾ|| ರಾಜ್ ಸುಪ್ರಭಾತ
Posted date: 03 Tue, Mar 2015 – 11:54:08 AM

ಸುಪ್ರಭಾತ ಎಂದಾಕ್ಷಣ ಪ್ರತಿಯೊಬ್ಬ ಶ್ರೀ ಸಾಮಾನ್ಯ ತಿಳಿದುಕೊಳ್ಳುವುದು ಯಾವುದೋ ದೇವರ ಮೇಲೆ ಯಾರೋ ಸುಪ್ರಭಾತ ಹಾಡಿರಬೇಕು ಎಂದು ಕೊಳ್ಳುತ್ತಾರೆ.
ಆದರೆ ವಿಷಯ ಅದಲ್ಲ, ಕನ್ನಡದ ಮೇರುನಟ ಹಾಗೂ ವಿಶ್ವದ ಯಾವುದೇ ಒಬ್ಬ ನಟನಿಗೆ ಸರಿಸಾಟಟಿಯಾಗಿ ನಿಲ್ಲಬಲ್ಲ ನಟರೆಂದರೆ ಅದು ಡಾ|| ರಾಜ್‌ಕುಮಾರ್.
ಕರ್ನಾಟಕದ ಪ್ರತಿಯೊಬ್ಬರ ಹೃದಯದಲ್ಲೂ ನೆಲೆನಿಂತಿರುವ ಡಾ|| ರಾಜ್‌ರನ್ನು ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ.  ಅದಕ್ಕೆ ಉದಾಹರಣೆ ಇತ್ತೀಚೆಗೆ ವರ್ಣದಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ದ ಅಭೂತಪೂರ್ವ ಯಶಸ್ಸು.
ಡಾ|| ರಾಜ್ ನಮ್ಮನಗಲಿ ೯ ವರ್ಷ ಕಳೆದರೂ ಅವರ ನೆನೆಪು ಹಚ್ಚ ಹಸಿರು.  ಇದೇ ಏಪ್ರಿಲ್ ೧೨ರಂದು ೯ನೇ ವರ್ಷದ ಪುಣ್ಯತಿಥಿಯಂದು ಡಾ|| ರಾಜ್‌ರ ಮೇಲೆ ಸುಪ್ರಭಾತವೊಂದು ಸಿ.ಡಿ. ಮೂಲಕ ಬಿಡುಗಡೆಯಾಗಲಿದೆ.
ಭಾರತೀಯ ಚಿತ್ರರಂಗದ ಯಾವೊಬ್ಬ ನಟ/ನಟಿಗೆ ಇದುವರೆವಿಗೂ ಯಾರೊಬ್ಬರು ಸುಪ್ರಭಾತವನ್ನು ಬಿಡುಗಡೆ ಮಾಡಿಲ್ಲ. ಈ ಗೌರವ ಡಾ|| ರಾಜ್‌ಗೆ ಲಭಿಸಲಿದೆ.  ಈ ಸುಪ್ರಭಾತ ಆಡಿಯೋವನ್ನು ಪ್ರಜಾಪ್ರಭುತ್ವ, ಗಂಗವ್ವ ಗಂಗಾಮಾಯಿ, ಸಿಡಿದೆದ್ದ ಗಂಡು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಮು. ರಮೇಶ್ ಸಿದ್ದಪಡಿಸಿದ್ದಾರೆ.
೨೭ ನಿಮಿಷದ ಈ ಸುಪ್ರಭಾತವು ೧೮ ನುಡಿಗಳನ್ನು ಹೊಂದಿದ್ದು, ೧೮ ವಿವಿಧ ರಾಗಗಳಲ್ಲಿ ಮೂಡಿ ಬರಲಿದೆ. ಅಜಯ್ ವಾರಿಯರ್ ಇದನ್ನು ಹಾಡಿದ್ದು, ಎಲ್.ಎನ್. ಗೂಚಿ ಸಂಗೀತ ನೀಡಿದ್ದಾರೆ.  ಚಿತ್ರದುರ್ಗದ ಕನ್ನಡ ಪ್ರಾಧ್ಯಾಪಕ ಕೃಷ್ಣಮೂರ್ತಿ ಸುಪ್ರಭಾತವನ್ನು ರಚಿಸಿದ್ದು, ಲಹರಿ ಸಂಸ್ಥೆ ಏಪ್ರಿಲ್ ೧೨ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed